`ಕ್ರೇಜಿ ಬಾಯ್` ಸತತ ಚಿತ್ರೀಕರಣ
Posted date: 06 Mon, Jul 2015 – 03:26:25 PM

ಕನ್ನಡ ಸಿನಿಮಾ ರಂಗದಲ್ಲಿ ಹೆಸರಾಂತ ಸಿನಿಮಗಳಾದ ಆಕಾಶ್, ಅರಸು, ಅಭಯ್, ಅಜಿತ್, ಚಿರು, ಮೆರವಣಿಗೆ, ಪರಮೇಷಿ ಪಾಂವಳ, ಪ್ರೇಮ್ ಅಡ್ಡ ಹಾಗೂ ಇನ್ನಿತರ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಅವರ ಕ್ರೇಜಿ ಬಾಯ್ ಚಿತ್ರಕ್ಕೆ ಸತತ 15 ದಿವಸಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿ ಈ ತಿಂಗಳ 13 ರಿಂದ ಹಾಡುಗಳ ಚಿತ್ರೀಕರಣಕ್ಕೆ ಸಜ್ಜಾಗುತ್ತ ಇದ್ದಾರೆ.

ಖ್ಯಾತ ನಿರ್ದೇಶಕ ಮಹೇಶ್ ಬಾಬು ಅವರು ಡಿ. ಪಿ ಎ ಫಿಲ್ಮ್ಸ್ ಅಡಿಯಲ್ಲಿ ದಿಲೀಪ್ ಪ್ರಕಾಷ್ ಹಾಗೂ ಆಶಿಕ ಯುವ ಜೋಡಿಯನ್ನು ಪರಿಚಯ ಮಾಡುತ್ತಾ ಇದ್ದಾರೆ. ಚಂದ್ರು ಈ ಚಿತ್ರದ ನಿರ್ಮಾಪಕರು.

ಶೇಖರ್ ಚಂದ್ರ ಅವರ ಛಾಯಾಗ್ರಹಣ, ಜಾಸಿ ಗಿಫ್ಟ್ ಅವರ ಸಂಗೀತ ಇರುವ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಅಜಯ್ ಕುಮಾರ್ ಅವರು ನೀಡಿದ್ದಾರೆ.

ಪೋಷಕ ಕಲಾವಿದರಲ್ಲಿ ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲ ಹಾಗೂ ಇತರರು ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed